ಬ್ರಹಸ್ಪತಿಯ ೬ನೇ ಗೋಚಾರ, ಹೇಗೆ? ಮತ್ತು ಏನಾಯ್ತು?
1
|
|
(ಗುರು)
|
ಚಂದ್ರ
|
ಲಗ್ನ
|
|
|
೦೭/೧೦/೧೯೫೨,
ರಾ.೧೧.೪೫
ಉಡುಪಿ
ಜಿಲ್ಲಾ
|
ಕೇತು
|
|
|
ರಾಹು
|
|
||
|
ಕುಜ
|
|
ಶುಕ್ರ
ಬುಧ
|
ರವಿ
ಶನಿ
|
ನೋಡಿ, ಬ್ರಹಸ್ಪತಿಯ ಮೊದಲನೇ ಸುತ್ತಿನಲ್ಲಿ , ಅಂದರೆ ೦-೧೨
ವರ್ಷದಲ್ಲಿ, ಪ್ರತೀ ರಾಶಿಯನ್ನು ಗೋಚಾರದಲ್ಲಿ ಸುತ್ತು ಹಾಕುತ್ತಾನೆ. ಈ ಜಾತಕರು ಹುಟ್ಟುವಾಗ
ಗುರು ಗ್ರಹವು ವಕ್ರಿಯಾಗಿ ಮೇಷದಲ್ಲಿ ಇದ್ದಾನೆ. ಮೊದಲ್ನೇ ೧ ವರ್ಷದಲ್ಲಿ ಆತನು ಮೇಷದಲ್ಲಿರುವನು.
ಆಗ ವಕ್ರಿ ಬ್ರಹಸ್ಪತಿಯನ್ನೇ ಮುಟ್ಟಿರುವನು. ಅದೇ ೨ ನೇ ವರ್ಷದಲ್ಲಿ ಆತನು ವೃಷಭದಲ್ಲಿರುವ
ಚಂದ್ರನನ್ನ ಮುಟ್ಟಿರುತ್ತಾನೆ. ಹೀಗೆ ೪ನೇ ವರ್ಷದಲ್ಲಿ ಕರ್ಕದಲ್ಲಿರುವ ಕೇತುವನ್ನ
ಮುಟ್ಟಿರುತ್ತನೆ. ೬ನೇ ವರ್ಷದಲ್ಲಿ ಅದೆ ಗೋಚರದ ಗುರುವು ರವಿ, ಬುಧ ಹಾಗೂ ಶನಿ ಗ್ರಹಗಳನ್ನ
ಮುಟ್ಟಿರುತ್ತಾನೆ. ೭ ನೇ ವರ್ಷದಲ್ಲಿ ಲಗ್ನದಿಂದ ಪಂಚಮ ಸ್ಥಾನವಾದ ತುಲಾದಲ್ಲಿರುವ ಇನ್ನೊಬ್ಬ ಗುರುವಾದ ಶುಕ್ರನನ್ನ
ಮುಟ್ಟಿರುತ್ತಾನೆ. ೮ನೇ ವರ್ಷದಲ್ಲಿ ವೃಸ್ಚಿಕದಲ್ಲಿರುವ ಕುಜನನ್ನ ಮುಟ್ಟಿರುತ್ತಾನೆ. ೧೦ನೇ
ವರ್ಷದಲ್ಲಿ ಅದೇ ಗೋಚರದ ಬ್ರಹಸ್ಪತಿಯು ಮಕರದಲ್ಲಿರುವ ರಾಹುವನ್ನ ಮುಟ್ಟಿರುತ್ತಾನೆ. ಇನ್ನು ೧೨ನೇ
ವರ್ಷದಲ್ಲಿ ಗೋಚಾರದ ಬ್ರಹಸ್ಪತಿಯು ಮೀನ ರಾಶಿಗೆ ಬಂದಿರುತ್ತಾನೆ. ಹೀಗೆ ಆತನ ಮುಂದಿನ ಸೈಕಲ್ಗಳೂ
ಇದೇ ರೀತಿ ಸಾಗುತ್ತವೆ.
2.
ಆದರೆ ನಾವಿಲ್ಲಿ ಏನನ್ನ ಗಮನಿಸಬೇಕೆಂದರೆ, ಇಲ್ಲಿ ಎಲ್ಲಿ
ಬ್ರಹಸ್ಪತಿಯು ಹುಟ್ಟುವಾಗ ಇದ್ದಾನೋ(ಈ ಜಾತಕದಲ್ಲಿ ಮೇಷದಲ್ಲಿರುವನು) ಆ ಮನೆಯ ಒಡೆಯನಾದ ಕುಜನು
ಯಾವ ಮನೆಯಲ್ಲಿರುವ? ಆತನ ದೃಷ್ಟಿ ಎಲ್ಲೆಲ್ಲಿ ಬಿದ್ದಿದೆ? ಹಾಗೂ ಆತನ ಟ್ರೈನ್ (ತ್ರಿಕೋಣ)
ದೃಷ್ಟಿ ಅಂದರೆ, ೫ ಮತ್ತು ೯ ಯಾವ ಯಾವ ಮನೆಗಳಿಗೆ ಬೀಳುತ್ತವೆ? ಎಂಬುದನ್ನ ತಿಳಿಯಬೇಕು.
3.
ಇನ್ನು ಬ್ರಹಸ್ಪತಿಯು ಎಲ್ಲಿ ಇರುವನೋ, ಆತನ ಮೇಲೆ ಯಾರ ಯಾರ
ದೃಷ್ಟಿ ಬಿದ್ದಿದೆ ಎನ್ನುವುದನ್ನೂ ತಿಳಿಯಬೇಕು. ಇದರಿಂದಾಗಿ,
a.
ನಾವು ಓವರಾಲ್ ಗೋಚಾರದ ಬ್ರಹಸ್ಪಪತಿಯು ಈ ಜಾತಕರಿಗೆ ಏನನ್ನ
ಮಾಡುತ್ತನೆಂಬುದನ್ನ ಅರಿಯಬಹುದು. ಹಾಗೆಯೇ, ವರ್ಷ ವರ್ಷ ಯಾವ ರೀತಿಯ ಫಲಗಳನ್ನ ಪಡೆಯುವರೆಂದೂ
ತಿಳಿಯಬಹುದು. ಕಾರಣ ಗುರು ಗೋಚಾರದಲ್ಲಿ ಪ್ರತಿಯೊಂದು ಮನೆಗೂ ಹೋಗುತ್ಟಾನೆಂಬುದನ್ನ ಮರೆಯದಿರಿ.
b.
ಈಗ ಈ ಜಾತಕರಿಗೆ ೬೫ ತುಂಬಿ ೬೬ ನಡೆಯುತ್ತಿದೆ. ಅಂದರೆ ಇವರ ೬೦
ನೇ ವರ್ಷದಲ್ಲಿ ಗುರು ಗ್ರಹವು ಮೀನದಲ್ಲಿ ಬಂದಿರುತ್ತಾನೆ.
c.
60ನೇ ವರ್ಷದಲ್ಲಿ ಗುರು ಗ್ರಹವು ಮತ್ತೆ
ಮೇಷದಲ್ಲಿರುವ ಗುರು ಗ್ರಹವನ್ನೇ ಮುಟ್ಟಿರುತ್ತಾನೆ. ಅಲ್ಲಿನ ಕುಜನು ಅಷ್ಟಮದಲಿಯ ವೃಶ್ಚಿಕ
ರಾಶಿಯಲ್ಲಿ ಉಪಸ್ಥಿತನು. ಆದ್ದರಿಂದ ಈ ಜಾತಕನಿಗೆ ಯಾವ ಕಾಹಿಲೆಯೂ ಇದ್ದ ಹಾಗಿಲ್ಲ. ಆದರೆ ಆತನ
ಮೇಲೆ ಶನಿಯ ೩ನೇ ದೃಷ್ಟಿ ಇದೆ. ಅಂದ ಮೇಲೆ ಸ್ವಲ್ಪ ಮಟ್ಟಿಗೆ ವಾಯು ಸಂಬಂಧಿತ ಹಾಗೂ ಬಿ.ಪಿ
ಸಂಬಂಧಿತ ಕಾಹಿಲೆಗಳಿಂದ ನರಳುತ್ತಾನೆ.
d.
ಮೇಷದಲ್ಲಿನ ಗುರುವಿನ ೭ನೇ ಮನೆಯಾದ ತುಲಾದಿಂದ ಶುಕ್ರನು
ನೋಡುತ್ತಿದ್ದಾನೆ. ಅಂದರೆ ಈ ಜಾತಕನಿಗೆ ಲಕ್ಶ್ಮಿಯ ಕೊರತೆಯು ಇಲ್ಲವೇ ಇಲ್ಲ. ಇದುಸರ್ವ ಕಾಲಕ್ಕೂ
ಅನ್ವಯವಾಗುತ್ತೆ.
e.
ಈ ಮನೆಯಿಂದ ತ್ರಿಕೋಣದ ಮನೆಗಳಾದ ಕುಂಭ ಮತ್ತು ಮಿಥುನವನ್ನ
ವಿಶ್ಲೇಷಣೆಯನ್ನ ಮಾಡಿದಾವಾಗ, ಈತನಿಗೆ ಲಾಭಕ್ಕೇನೂ ಕೊರತೆ ಇಲ್ಲ. ಶನಿಯು ನಿಧಾನ ಮಾಡೀದರೂ ಸಹ
ನ್ಯಾಯದಿಂದ ನಡೆದುಕೊಳ್ಳುವ ಈತನಿಗೆ ಸಾಕಷ್ಟು ಜೀವನದಲ್ಲಿ ಲಾಭವನ್ನ ಕೊಟ್ಟಿದ್ದಾನೆ. ಹಾಗೂ ೬೧
ನೇ ವರ್ಷದಲ್ಲಿಯೂ ಸಹ ಇವರಿಗೆ ರಿಟಾಯರ್ಮೆಂಟ್ಸಿನ ಹಣವೆಲ್ಲಾ ಬಂದು ಸಾಕಷ್ಟು ಖುಷಿಯನ್ನ
ಕೊಟ್ಟಿರುತ್ತದೆ.
f.
ಮಿಥುನದ ಮೇಲೆ ಶನಿಯ ದೃಷ್ಟಿ ಬಿದ್ದದ್ದರಿಂದ ಈತನ ಶೌರ್ಯಕ್ಕೇನೂ
ಕಮ್ಮಿಯೇನೂ ಇಲ್ಲ. ೬೦ ರಲ್ಲಿ ಸಣ್ಣ ಪುಟ್ಟ ಪ್ರಯಾಣವನ್ನೂ ಮಾಡಿರುತ್ತಾನೆ.
g.
ಇನ್ನು ನಾವು ಈತನ ೬೧ನೇ ವರ್ಷವನ್ನ ನೋಡೋಣ. ಗುರು ಗೋಚಾರದಲ್ಲಿ
ವೃಷಭ ರಾಶಿಗೆ ಬಂದಿರುತ್ತಾನೆ. ಅಂದರೆ ಒಂದು ರೀತಿಯ ಗಜಕೇಸರೀ ಯೋಗವನ್ನುಂಟು ಮಾಡಿರುತ್ತಾನೆ.
ಆದ್ದರಿಂದ ಈತನಿಗೆ ಸಮಾಜದಲ್ಲಿ ಗೌರವ ಖಂಡಿತ ಬಂದಿರುತ್ತೆ. ಅದೇ ಸಪ್ತಮದಲ್ಲಿನ ಕುಜನು ಈತನ ಪಾರ್ಟ್ನರಶಿಪ್ಪಿನೊಡನೆ
ಸಣ್ಣ ಪುಟ್ಟ ವಾದವಿವಾದಗಳನ್ನ ಖಂಡಿತ ಎಬ್ಬಿಸಿದ್ದಾನೆ.ದರೆ ಈ ವಯಸ್ಸಿನಲ್ಲಿ ಅವರಿಗೆ ನಿವೃತ್ತ
ಹಣ ಬಂದಿರುತ್ತೆ.
h.
ಅದೇ ಈತನ ೬೫ ನೇ ವರ್ಷವನ್ನ(2016)
ನೋಡೋಣ! ಗುರು ಗ್ರಹವು ಕನ್ಯಾಕ್ಕೆ ಬಂದಿರುತ್ತಾನೆ. ಸಪ್ಟೆಂಬರ್ ೧೧ರ ವರೆಗೆ ಗುರು ಗೋಚಾರದಲ್ಲಿ
ಕನ್ಯಾ ರಾಶಿಯಲ್ಲಿದ್ದಾನೆ. ಲಕ್ಷ್ಮಿಯಾದ ಶುಕ್ರನು ಗೋಚಾರದ ಗುರುವಿನಿಂದ ೨ನೇ
ಸ್ಥಾನದಲ್ಲಿರುವುದು, ಜಾತಕನಿಗೆ ಲಕ್ಶ್ಮಿಯ ಕೊರತೆ ಇಲ್ಲಾ ಅಂತ ತೋರಿಸುತ್ತೆ. ನಾಲ್ಕನೇ ಮನೆಯ
ಅಧಿಪತಿಯಾದ ಗುರು ಗ್ರಹವು, ಜಾತಕನ ಶನಿ, ರವಿ ಹಾಗೂ ಬುಧನೊಡನೆ ಇದ್ದು ಒಂದು ರೀತಿಯಲ್ಲಿ
ಗಜಕೇಸರೀ ಯೋಗವನ್ನುಂಟುಮಾಡಿರುತ್ತಾನೆ. ನಾವೀಗ ರಾಶಿಯಿಂದ ನೋಡುವುದಾದರೆ, ಈತನಿಗೆ ಗುರು
ಲರ್ನೆಡ್ ಪ್ರೊಫೆಸ್ಸರನ್ನಾಗಿ ಮಾಡಬೇಕು. ಹಾಗೆಯೇ ಅಗಿದೆ ಅನ್ನಿ. ಈತನಿಗೆ ಧಲಿಯಲ್ಲಿರುವ ಆದ್ಯ
ಕಾತ್ಯಾಯ್ನೀ ಮಂದಿರದ ಆಡಿಟೋರಿಯಮ್ಮಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಓರಿಯಂಟಲ್ ಹೆರಿಟೇಜ್,
ಕೋಲ್ಕತ್ತಾದವರು ಗೌರವ ಡಾಕ್ಟೊರೇಟ್ ಡಿಗ್ರೀಯನ್ನ ಕೊಟ್ಟು ಸನ್ಮಾನಿಸಿದ್ದಾರೆ. ಇನ್ನು
ಶುಕ್ರನಿಂದ ಪಂಚಮ ಸ್ಥಾನವು ಪೂರ್ವ ಪುಣ್ಯಸ್ಥಾನವಾಗಿರುತ್ತೆ.
4.
ಹೀಗೆ ನಾವುಗಳು ಈತನ ಪ್ರತಿಯೊಂದು ಮನೆಯನ್ನೂ ವಿವರಿಸಬಹುದು.
ಡಾ. ಪಿ. ಸುರೇಂದ್ರ ಉಪಾಧ್ಯ
೧೪/೧೨/೨೦೧೭
ಬೆಂಗಳೂರು.
Comments
Post a Comment